Akshaya Patra ಫೌಂಡೇಶನ್ ಇತಿಹಾಸ
ನಮ್ಮ ಫೌಂಡೇಶನ್ ಇತಿಹಾಸವು ಅನುಕಂಪದ ಕಥೆಯ ಜೊತೆ ಆರಂಭವಾಗುತ್ತದೆ -
ಕಲ್ಕತ್ತಾ ಹತ್ತಿರದ ಒಂದು ಹಳ್ಳಿ ಮಯಾಪುರ್ ನಲ್ಲಿ ಒಂದು ದಿನ ಕಿಟಕಿಯಿಂದ ಹಾಗೆ ಹೊರಗೆ , ಎ ಸಿ ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ದೇವರು j, ಆಹಾರ ಚೂರುಗಳಿಗಾಗಿ ಬೀದಿ ನಾಯಿಗಳ ಜೊತೆ ಹೋರಾಟ ಮಾಡುತ್ತಿರುವ ಒಂದು ಮಕ್ಕಳ ಗುಂಪನ್ನು ನೋಡಿದರು. ಈ ಸರಳ ಮತ್ತು ದುಃಖಕರ ಘಟನೆಯಿಂದ ಒಂದು ನಿರ್ಣಯವನ್ನು ತೆಗೆದುಕೊಂಡರು; ಅದು ನಮ್ಮ ಕೇಂದ್ರದಿಂದ ಹತ್ತು ಮೈಲಿ ವ್ಯಾಪ್ತಿಯಲ್ಲಿ ಯಾವುದೇ ಮಗುವು ಹಸಿವಿನಿಂದ ಇರಬಾರದು ಎಂದು.
ಅವರ ಸ್ಪೂರ್ತಿದಾಯಕ ನಿರ್ಧಾರದಿಂದ ಇಂದು Akshaya Patra ಫೌಂಡೇಶನ್ ಸೃಷ್ಟಿಸುವಲ್ಲಿ ನಮಗೆ ಸಹಾಯ ಮಾಡಿದೆ.
ಜೂನ್ 2000 ರಲ್ಲಿ, Akshaya Patra ಫೌಂಡೇಶನ್ ಕರ್ನಾಟಕದ ಬೆಂಗಳೂರಿನಲ್ಲಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಆರಂಭಿಕ ದಿನಗಳಲ್ಲಿ ಇದನ್ನು ಅನುಷ್ಠಾನಗೊಳಿಸುವುದು ಸಂಸ್ಥೆಗೆ ಅಷ್ಟು ಸುಲಭವಾಗಿರಲಿಲ್ಲ, ಆದರೆ ಶೀಘ್ರದಲ್ಲೇ, ಮೋಹನ್ ದಾಸ್ ಪೈ ಅವರ ಸಹಾಯ ಹಸ್ತಗಳು ಸಿಕ್ಕವು, ಅವರು ಶಾಲೆಗಳಿಗೆ ಆಹಾರವನ್ನು ಸಾಗಾಣಿಕೆ ಮಾಡಲು ಮೊದಲ ವಾಹನವನ್ನು ದಾನ ನೀಡಿದರು ಮತ್ತು ಅಭಯ್ ಜೈನ್ ಅವರು ಈ ಕಾರ್ಯಕ್ರಮವನ್ನು ಮತ್ತಷ್ಟು ವಿಸ್ತರಣೆ ಮಾಡಲು ಹೆಚ್ಚು ದಾನಿಗಳನ್ನು ಕರೆತರುವ ಭರವಸೆ ನೀಡಿದರು.
ಮಹದಾಸೆಗೆ ಅನುಗುಣವಾಗಿ, ಕಾರ್ಯಕ್ರಮವು - ". ಭಾರತದ ಯಾವುದೇ ಮಗು ಹಸಿವಿನ ಕಾರಣದಿಂದ ಶಿಕ್ಷಣದ ವಂಚಿತವಾಗುವ ಹಾಗಿಲ್ಲ ಎಂಬ" ದೂರದೃಷ್ಟಿಯನ್ನು ಪಡೆದುಕೊಂಡಿತು.
ಬೆಂಗಳೂರಿನ ಐದು ಸರ್ಕಾರಿ ಶಾಲೆಗಳಲ್ಲಿ 1500 ಮಕ್ಕಳಿಗೆ ಮಧ್ಯಾಹ್ನ ಊಟವನ್ನು ಸಲ್ಲಿಸುವ ಮೂಲಕ ವಿನೀತ ಕಾರ್ಯವು ಪ್ರಾರಂಭವಾಯಿತು..
ಇಂದು, ಭಾರತ ಸರಕಾರ ಮತ್ತು ವಿವಿಧ ರಾಜ್ಯ ಸರಕಾರಗಳು, ಹಾಗೆಯೇ ಅನೇಕ ಲೋಕೋಪಕಾರಿ ದಾನಿಗಳ ಉದಾರತೆ ಸಹಭಾಗಿತ್ವದಲ್ಲಿ; ಈ ಸಂಸ್ಥೆಯು ವಿಶ್ವದ ಅತಿ ದೊಡ್ಡ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಒಂದು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿತವಾದ Akshaya Patra ಯು ಪೌಷ್ಠಿಕಾಂಶಭರಿತ ಮತ್ತು ನೈರ್ಮಲ್ಯಯುತವಾದ ಶಾಲಾ ಭೋಜನವನ್ನು ವಿತರಿಸಲು ಉತ್ತಮ ನಿರ್ವಹಣೆ, ನವೀನ ತಂತ್ರಜ್ಞಾನ ಮತ್ತು ಸ್ಮಾರ್ಟ್ ಎಂಜಿನಿಯರಿಂಗ್ ಅನ್ನು ಒಳಗೊಂಡಿದೆ.
ಸಂಸ್ಥೆಯು ಭಾರತದಾದ್ಯಂತ 9 ರಾಜ್ಯಗಳ 20 ಸ್ಥಾನಗಳಲ್ಲಿ 10,000 ಸರ್ಕಾರಿ ಶಾಲೆಗಳ 1.3 ಮಿಲಿಯನ್ ಸವಲತ್ತುಗಳಿಂದ ವಂಚಿತರಾದ ಮಕ್ಕಳಿಗೆ ಪ್ರತಿನಿತ್ಯವು ತಾಜಾ ಬೇಯಿಸಿದ, ಆರೋಗ್ಯಕರ ಊಟವನ್ನು ವಿತರಿಸುತ್ತದೆ.
The Akshaya Patra Foundation © 2015 Website Designed & Maintenance By Creative Yogi

